ಮುನ್ನಾರ್ !

ಯಾವುದಾದರೊಂದು ಹೊಸ ಜಾಗಕ್ಕೆ ಭೇಟಿ ನೀಡದೆ ಅಥವಾ ಯಾವುದಾದರೊಂದು ಹೊಸ ಬಗೆಯ ರುಚಿ ಸೇವಿಸದೆ ಕಳೆದ ವಾರಾಂತ್ಯಗಳು ನನಗೆ ಒಗ್ಗರಣೆ ಇಲ್ಲದ ಅಡುಗೆಯಂತೆ ಭಾಸವಾಗಿ ಕಾಡುತ್ತವೆ.ಈ ವಾರಾಂತ್ಯದಲ್ಲಿ ಏನು ಮಾಡಲಿ ಎಂದು ಯೋಚಿಸುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಗೆಳೆಯನೋರ್ವ ತನ್ನ ಗೆಳೆಯರೊಂದಿಗೆ ತಾನು ಮುನ್ನಾರ್ ಗೆ ತೆರಳುತ್ತಿರುವುದರ ಬಗ್ಗೆ ತಿಳಿಸಿ , ನನ್ನನ್ನೂ ಆಮಂತ್ರಿಸಿದ. ಹೆಚ್ಚೇನು ಯೋಚಿಸದೆ ಒಪ್ಪಿದೆ. ಆದರೆ ಆಗ , ಅದು ನನ್ನ ಜೀವನದ ಅತ್ಯದ್ಭುತವಾದ ಅನುಭವಗಳಲ್ಲಿ ಒಂದಾಗಲಿದೆ ಎಂಬುದರ ಅರಿವಿರಲಿಲ್ಲ. ಹಾಗಾಗಿ ,ಈ ಲೇಖನದContinue reading “ಮುನ್ನಾರ್ !”

ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ

ಅಂದು ಮುಂಜಾನೆ ಬಹಳ ಬೇಗನೆ ಎದ್ದು ಒಂದು ವಿಶೇಷ ಸ್ಥಳದ ಕಡೆಗೆ ಹೊರಟಿದ್ದೆ. ಅದೆಷ್ಟೋ ಮಾರುಕಟ್ಟೆಗಳನ್ನು ನೋಡಿದ್ದರೂ , ಈ ಮಾರುಕಟ್ಟೆಯನ್ನು ನೋಡುವ ಕುತೂಹಲ ಹೆಚ್ಚಾಗುತ್ತಿತ್ತು. ಅಂದಹಾಗೆ ನಾನು ಅಲ್ಲಿಗೆ ಹೋಗುತ್ತಿದ್ದದ್ದು , ಯಾವ ಖರೀದಿಗೂ ಅಲ್ಲ.ಕೇವಲ ಅಲ್ಲಿನ ದೃಶ್ಯಗಳನ್ನು ಕಂಡು ಆನಂದಿಸುವುದಕ್ಕೆ . ಅನೇಕ ಕನಸುಗಳು ಓಡಾಡಿಕೊಂಡಿರುವ ಊರಿನಲ್ಲಿ , ಹಲವಾರು ಕನಸುಗಳನ್ನು ನನಸಾಗಿಸುವ , ಶ್ರಮದ ಫಲಿತಾಂಶವನ್ನು ಸೂರ್ಯ ಬೆಳಗುವ ಮುನ್ನವೆ ಪ್ರಕಟಿಸುವ ನೂರಾರು ಲೆಕ್ಕಾಚಾರಗಳ ತವರಾಗಿದೆ ಕೆ.ಆರ್ ಫ್ಲವರ್ ಮಾರ್ಕೆಟ್. ಆ ಸ್ಥಳದContinue reading “ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ”

ಅಮ್ಮ ಎಂದು ಕರೆದು ..

ಮನೆಯಿಂದ ದೂರದಲ್ಲೆಲ್ಲೊ ಕಾರಣಾಂತರಗಳಿಂದ ವಾಸಿಸುವಾಗ , ಅನೇಕ ತಪ್ಪು ಕಲ್ಪನೆಗಳ ಅರಿವಾಗುತ್ತದೆ. ಇಲ್ಲಿಂದ ದೂರ ಹೋಗಿ ಎಲ್ಲಾದರೂ ಒಬ್ಬನೇ ಆರಾಮವಾಗಿ ಇರಬಹುದು , ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನನಗೀಗ ಇದೆ. ಹೀಗೆಂದು ಮನೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವಾಗ ಆಲೋಚಿಸಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಮನೆಯವರ ಪ್ರಶ್ನೆಗಳು , ಅದರ ಹಿಂದಿದ್ದ ನಮ್ಮ ಮೇಲಿನ ಕಾಳಜಿ , ಕಿರಿಕಿರಿ ಎಂದನಿಸುತ್ತಿದ್ದ ಸಲಹೆಗಳು ..ಈಗ ಕೈ ಹಿಡಿದು ರಕ್ಷಿಸುತ್ತಿರುವ ರೀತಿಯನ್ನು ಮೂಕನಾಗಿ ಗಮನಿಸುತ್ತಾ , ಎಂದೂContinue reading “ಅಮ್ಮ ಎಂದು ಕರೆದು ..”

ಜಾಲಹಳ್ಳಿ ಕ್ರಾಸ್!

ತುಂಬಾ ಸಮಯದ ನಂತರ ಮನೆಗೆ ತೆರಳಿ , ಮನಸಾರೆ ಆನಂದಿಸಿ ಒಂದೆರಡು ದಿನಗಳನ್ನು ಕಳೆದು , ಮತ್ತೆ ಕೆಲಸದ ಕಾರಣದಿಂದ ನೆಲೆಸಿರುವ ಬೆಂಗಳೂರಿನೆಡೆಗೆ ತೆರಳುವ ಬಸ್ ಹತ್ತಬೇಕು. ಇದೊಂದು ಅನಿವಾರ್ಯ ಕಾರ್ಯ ಎಂದು ಒಪ್ಪಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಿತ್ತು ನನಗೆ. ಆ ಬಸ್ ಹತ್ತುವಾಗ , ಈ ಬೆಂಗಳೂರಿನಲ್ಲಿ ಬಿಟ್ಟು ಹೋದ ಎಲ್ಲಾ ತೊಂದರೆಗಳು ಅಂದಿನ ರಾತ್ರಿ ನಾನು ಮಲಗಲಿರುವ ಬೆಡ್ ನ ಮೇಲೆ ಕುಳಿತುಕೊಂಡು , ನನ್ನನ್ನೇ ಕಾಯುತ್ತಿರುವ ಹಾಗೆ ಭಾಸವಾದದ್ದೂ ಇದೆ. ಅಂದಿನ ರಾತ್ರಿಯContinue reading “ಜಾಲಹಳ್ಳಿ ಕ್ರಾಸ್!”

ಕುಮಾರಪರ್ವತ – ಭಾಗ – ೩

ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಸ್ವಲ್ಪ ಹಿಂದೆಯ ತನಕ ಹೋಗಿ ನೋಡಿಕೊಂಡು ಬಂದರು. ಕಾಲು ನೋವಾಗುತ್ತಿದ್ದ ಕಾರಣ ಆತ ಅಲ್ಲೇ ಹಿಂದೆಲ್ಲೋ ಕುಳಿತು ಬಿಟ್ಟಿದ್ದ . ಆತನನ್ನು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ನೀರು ಹರಿಯುತ್ತಿದ್ದ ಜಾಗದ ಬಳಿ ಬಿಟ್ಟು , ನಾವು ಮುನ್ನಡೆದೆವು. ಸುಮಾರು ಇಪ್ಪತ್ತು ನಿಮಿಷಗಳ ನಂತರ ಕೊನೆಗೂ ಕಲ್ಲು ಮಂಟಪ ತಲುಪಿದೆವು. ಟ್ರೆಕ್ ಆರಂಭಿಸುವಾಗ ತೆಗೆದುಕೊಂಡಿದ್ದ ಪುಲಾವ್ ಸೇವಿಸಲು ಇದುವೇ ಸೂಕ್ತ ಸಮಯ ಎಂದು ನಿರ್ಧರಿಸಿದೆವು. ಒಟ್ಟಿನಲ್ಲಿ ಅದೆಷ್ಟೋ ಸಾಹಸಿಗಳು ಬೆಟ್ಟವನ್ನುContinue reading “ಕುಮಾರಪರ್ವತ – ಭಾಗ – ೩”

ಕುಮಾರಪರ್ವತ – ಭಾಗ – ೨

ಟ್ರೆಕ್ ಗೆ ತೆರಳುವಾಗ ಕೆಲವು ವಿಚಾರಗಳನ್ನು ನೆನಪಿಡಬೇಕು . ಅದೆಷ್ಟೇ ಕಷ್ಟವಾದರೂ , ಕೇವಲ ಮೂಗಿನಿಂದ ಉಸಿರಾಡಬೇಕು . ನೀವು ಏದುಸಿರು ಬಿಡುತ್ತಾ ಬಾಯಿಯಿಂದ ಉಸಿರಾಡಿದರೆ , ತುಂಬಾ ಬೇಗ ಸುಸ್ತಾಗುತ್ತದೆ . ಅತಿಯಾಗಿ ಬಾಯಾರಿಕೆ ಆದರೂ , ಸ್ವಲ್ಪವೇ ನೀರು ಕುಡಿಯಬೇಕು. ಅಗತ್ಯವಿಲ್ಲದ ಯಾವುದೇ ವಸ್ತುವನ್ನು ಅಪ್ಪಿತಪ್ಪಿಯೂ ಹೊತ್ತಕೊಂಡು ಹೋಗಬಾರದು. ನಾನು ಈ ಮೂರೂ ತಪ್ಪುಗಳನ್ನು ಮಾಡಿದ್ದೆ. ಪಯಣದುದ್ದಕ್ಕೂ ನನ್ನ ರೂಮ್ ಮೇಟ್ ನಾನು ಉಸಿರಾಟದ ಹಾಗು ನೀರಿನ ವಿಚಾರದಲ್ಲಿ ಮಾಡುತ್ತಿದ್ದ ತಪ್ಪನ್ನು ಮತ್ತೆ ಮತ್ತೆContinue reading “ಕುಮಾರಪರ್ವತ – ಭಾಗ – ೨”

ಕುಮಾರಪರ್ವತ -ಭಾಗ-೧

“ಬಸ್ ಎಷ್ಟೊತ್ತಿಗೆ ?” ಎಂದು ನನ್ನ ರೂಮ್ ಮೇಟ್ ಗೆ ಕೇಳುವಷ್ಟು ಗಟ್ಟಿಯಾಗಿ ಕಿರುಚುತ್ತಾ , ಅದಾಗಲೇ ಹತ್ತು ಬಾರಿ ಅಲೋಚಿಸಿ ಆಯ್ದುಕೊಂಡ ಬಟ್ಟೆ , ತಿಂಡಿಗಳನ್ನು ಪರಿಶೀಲಿಸುತ್ತಾ ಬ್ಯಾಗಿನ ಒಳಗೆ ತುರುಕಿಸುತ್ತಿದ್ದೆ. ನನ್ನ ಬಳಿ ಇದ್ದ ಶೂ ಹಾಗು ಬ್ಯಾಗ್ , ಟ್ರೆಕ್ ಎಂಬ ಸಾಹಸವನ್ನು ಇನ್ನಷ್ಟು ಕಠಿಣಗೊಳಿಸಲಿವೆ ಎಂಬುದು ಆಗಲೇ ನನಗೆ ತಿಳಿದಿತ್ತು . ಅವೆರಡೂ ಈ ಪಯಣಕ್ಕೆ ಸಾಟಿಯಾಗದ ಸಂಗಾತಿಗಳು. ಆದರೆ ಬೇರೆ ಆಯ್ಕೆಯೂ ಇರಲಿಲ್ಲ. ನಾನು ಜೀವಮಾನದಲ್ಲಿ ಕೈಗೊಂಡ ಈ ಮೊದಲContinue reading “ಕುಮಾರಪರ್ವತ -ಭಾಗ-೧”