ದಿನಪತ್ರಿಕೆ

ಯಾವುದಕ್ಕೂ ಸಮಯವಿಲ್ಲ ಎಂದುಕೊಂಡು ಕೊನೆಗೆ ಯಾವ ಕೆಲಸವನ್ನೂ ಮಾಡದೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ದಿನಚರಿ ಸಾಮಾನ್ಯವಾಗಿ ಬಿಟ್ಟಿದೆ.ಎಲ್ಲಾ ಸುದ್ದಿಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡು ನಂತರ ಎಲ್ಲಾ ತಿಳಿದಿರುವಂತೆ ಮಾತನಾಡಿಕೊಂಡು ತಿರುಗಾಡುವವರನ್ನು ನೋಡಿದಾಗ , ಗೂಡಂಗಡಿಗಳಲ್ಲಿ ನೇತಾಡಿಕೊಂಡಿರುವ ಹಾಗು ಮನೆಯ ಧೂಳನ್ನು ಮನಸಾರೆ ಸ್ವೀಕರಿಸಿರುವ ದಿನಪತ್ರಿಕೆಗಳು ಏನಂದುಕೊಂಡಿರಬಹುದು ಎಂಬ ಕುತೂಹಲ ಕಾಡುತ್ತಿರುತ್ತದೆ‌. ದಿನಪತ್ರಿಕೆ ಹಾಲಿನ ಪ್ಯಾಕೆಟ್ ಜೊತೆ ಮನೆಯಂಗಳದಲ್ಲಿ ಮುಂಜಾನೆ ಕಾಣದಿದ್ದರೆ ಏನೋ ಸಂಕಟ. ಮನೆತುಂಬಾ ಓಡಾಡುತ್ತಾ ಪೇಪರ್ ನವನನ್ನು ಶಪಿಸುತ್ತಾ ತಿರುಗಾಡುವುದು. ಐದು ನಿಮಿಷಗಳಿಗೊಮ್ಮೆ ಬಾಗಿಲಿನ ಬಳಿಗೆContinue reading “ದಿನಪತ್ರಿಕೆ”

ನಗಲು ನೆನಪಿಸುವವರು

ಯಾವುದೇ ಸಮಾರಂಭಕ್ಕೆ ಹೋದರೂ , ನಾನು ತಪ್ಪದೆ ಗಮನಿಸುವವರೆಂದರೆ , ತಮ್ಮ ಆನಂದದ ಕ್ಷಣಗಳನ್ನು ನೆನಪಿನಲ್ಲೇ ಸಂಗ್ರಹಿಸುತ್ತಾ ಅಲೆದಾಡುವ ಫೋಟೋಗ್ರಾಫರ್ ಗಳು. ಎಲ್ಲರ ಬೇಡಿಕೆಗಳನ್ನು ಪೂರೈಸುತ್ತಾ , ಇತರರ ನಗುವಿಗೆ ಸಾಕ್ಷಿಯಾಗುವ ವಿಶೇಷ ವ್ಯಕ್ತಿಗಳು ಅವರು. ಅವರ ಕೌಶಲ್ಯವನ್ನು ಕಡೆಗಣಿಸಿ , ಅವರಿಗೆ ತಮ್ಮದೇ ವಿಚಿತ್ರ ಸೂಚನೆಗಳನ್ನು ನೀಡುವ ಹಲವರು. ಅವರ ಅಭಿಪ್ರಾಯಕ್ಕೂ ಕಾಯದೆ , ತಮಗೆ ಸಮಾಧಾನವಾಗುವವರೆಗೆ ಫೋಟೋ ತೆಗೆಸಿಕೊಳ್ಳುವ ಹಲವರು. ಇವರೆಲ್ಲರನ್ನೂ ಮೀರಿ , ಅವರು ಕಣ್ಣೆದುರು ನಿಂತಿದ್ದರೂ ತಮ್ಮದೇ ಫೋನನ್ನು ಅವಲಂಬಿಸುವ ವೀರರು.Continue reading “ನಗಲು ನೆನಪಿಸುವವರು”

ಮುನ್ನಾರ್ !

ಯಾವುದಾದರೊಂದು ಹೊಸ ಜಾಗಕ್ಕೆ ಭೇಟಿ ನೀಡದೆ ಅಥವಾ ಯಾವುದಾದರೊಂದು ಹೊಸ ಬಗೆಯ ರುಚಿ ಸೇವಿಸದೆ ಕಳೆದ ವಾರಾಂತ್ಯಗಳು ನನಗೆ ಒಗ್ಗರಣೆ ಇಲ್ಲದ ಅಡುಗೆಯಂತೆ ಭಾಸವಾಗಿ ಕಾಡುತ್ತವೆ.ಈ ವಾರಾಂತ್ಯದಲ್ಲಿ ಏನು ಮಾಡಲಿ ಎಂದು ಯೋಚಿಸುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಗೆಳೆಯನೋರ್ವ ತನ್ನ ಗೆಳೆಯರೊಂದಿಗೆ ತಾನು ಮುನ್ನಾರ್ ಗೆ ತೆರಳುತ್ತಿರುವುದರ ಬಗ್ಗೆ ತಿಳಿಸಿ , ನನ್ನನ್ನೂ ಆಮಂತ್ರಿಸಿದ. ಹೆಚ್ಚೇನು ಯೋಚಿಸದೆ ಒಪ್ಪಿದೆ. ಆದರೆ ಆಗ , ಅದು ನನ್ನ ಜೀವನದ ಅತ್ಯದ್ಭುತವಾದ ಅನುಭವಗಳಲ್ಲಿ ಒಂದಾಗಲಿದೆ ಎಂಬುದರ ಅರಿವಿರಲಿಲ್ಲ. ಹಾಗಾಗಿ ,ಈ ಲೇಖನದContinue reading “ಮುನ್ನಾರ್ !”

ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ

ಅಂದು ಮುಂಜಾನೆ ಬಹಳ ಬೇಗನೆ ಎದ್ದು ಒಂದು ವಿಶೇಷ ಸ್ಥಳದ ಕಡೆಗೆ ಹೊರಟಿದ್ದೆ. ಅದೆಷ್ಟೋ ಮಾರುಕಟ್ಟೆಗಳನ್ನು ನೋಡಿದ್ದರೂ , ಈ ಮಾರುಕಟ್ಟೆಯನ್ನು ನೋಡುವ ಕುತೂಹಲ ಹೆಚ್ಚಾಗುತ್ತಿತ್ತು. ಅಂದಹಾಗೆ ನಾನು ಅಲ್ಲಿಗೆ ಹೋಗುತ್ತಿದ್ದದ್ದು , ಯಾವ ಖರೀದಿಗೂ ಅಲ್ಲ.ಕೇವಲ ಅಲ್ಲಿನ ದೃಶ್ಯಗಳನ್ನು ಕಂಡು ಆನಂದಿಸುವುದಕ್ಕೆ . ಅನೇಕ ಕನಸುಗಳು ಓಡಾಡಿಕೊಂಡಿರುವ ಊರಿನಲ್ಲಿ , ಹಲವಾರು ಕನಸುಗಳನ್ನು ನನಸಾಗಿಸುವ , ಶ್ರಮದ ಫಲಿತಾಂಶವನ್ನು ಸೂರ್ಯ ಬೆಳಗುವ ಮುನ್ನವೆ ಪ್ರಕಟಿಸುವ ನೂರಾರು ಲೆಕ್ಕಾಚಾರಗಳ ತವರಾಗಿದೆ ಕೆ.ಆರ್ ಫ್ಲವರ್ ಮಾರ್ಕೆಟ್. ಆ ಸ್ಥಳದContinue reading “ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ”

ನಾಳೆಯಿಂದ ಖಂಡಿತ!

ಇರುವ ನೂರಾರು ವಿಚಾರಗಳನ್ನೆಲ್ಲಾ ಮರೆತು , ಏನಾದರೂ ಹೊಸತನ್ನು ಹುಡುಕಾಡುವ ಮನಸ್ಥಿತಿ ನನಗೆ ಬಹಳ ಕುತೂಹಲಕಾರಿಯಾದದ್ದು ಎಂದನಿಸುತ್ತದೆ. ಅನುಸರಿಸುತ್ತಿರುವ ಹಾಗು ಮಾಡುತ್ತಿರುವ ಕೆಲಸಗಳಿಂದ ಅನುಭವಿಸುತ್ತಿರುವ ಕೆಟ್ಟ ಪರಿಣಾಮಗಳ ಅರಿವಿದ್ದರೂ ಅದನ್ನೇ ಮುಂದುವರಿಸಿಕೊಂಡು ಹೋಗುವ ದಿನಚರಿ ಇನ್ನೊಂದೆಡೆ. ಈ ಎರಡೂ ವಿಚಾರಗಳು ಪರಿಹಾರದ ನೆಪದಲ್ಲಿ ಒಂದಾಗುವ ದಾರಿಗಳು. ಆದರೆ ಈ ಒಂದಾದ ದಾರಿಯಲ್ಲಿ ಸಾಗುವ ಮುಹೂರ್ತ ಮಾತ್ರ , ನಾವೇ ಕರೆದು ಅದು ಬಂದಾಗ ಆಮೇಲೆ ಬರಲು ಹೇಳುವ ಮುಂಜಾನೆಯ ಅಲಾರ್ಮ್ ನಂತೆ. ಏನೇನೋ ಉನ್ನತವಾದ ವಿಚಾರಗಳನ್ನೆಲ್ಲಾ ಆಲೋಚಿಸಿContinue reading “ನಾಳೆಯಿಂದ ಖಂಡಿತ!”

ಮೌನದ ಊರಿನಲ್ಲೊಂದು ಮನೆಯ ಮಾಡಿ…

ಅನೇಕ ದಿನಗಳ ಒದ್ದಾಟದ ನಂತರ , ಕೊನೆಗೂ ಹಲ್ಲಿನ ನೋವಿನಿಂದ ಮುಕ್ತಿ ಸಿಗಲಿದೆ ಎಂಬ ಉತ್ಸಾಹದೊಂದಿಗೆ ಅಂದು ಮನೆಯಿಂದ ಹೊರಟಿದ್ದೆ. ಹಿಂದಿನ ದಿನ ಎಷ್ಟು ಪ್ರಯತ್ನಿಸಿದರೂ ನಿದ್ರಿಸಲಾಗದೆ , ಈ ವಿಚಾರದ ಕುರಿತೇ ವಿಚಿತ್ರ ಆಲೋಚನೆಗಳು ಮನಸ್ಸಿನ ತುಂಬಾ ಓಡಾಡುತ್ತಿದ್ದವು. ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ , ನನಗೆ ಹಲ್ಲಿನ ಆಸ್ಪತ್ರೆಗಳು ವಿಭಿನ್ನವಾಗಿ ಕಾಣುತ್ತವೆ. ಅಲ್ಲೊಂದು ಭಯಾನಕವಾದರೂ ಬಹಳ ವಿಶೇಷವಾದ ಸುಗಂಧವಿರುತ್ತದೆ ಎಂಬುದು ನನ್ನ ನಂಬಿಕೆ. ಬಸ್ಸಿನಲ್ಲಿ ತೆರಳುತ್ತಿದ್ದಾಗ , ಟಿಕೆಟ್ ವಿಚಾರದಲ್ಲಿ ಕಂಡಕ್ಟರ್ ನೊಂದಿಗೆ ಮಾತನಾಡಿದಾಗ ,Continue reading “ಮೌನದ ಊರಿನಲ್ಲೊಂದು ಮನೆಯ ಮಾಡಿ…”

ಏಳನೆ ಮಹಡಿಯ ಹೂವು

ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆContinue reading “ಏಳನೆ ಮಹಡಿಯ ಹೂವು”