ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ

ಅಂದು ಮುಂಜಾನೆ ಬಹಳ ಬೇಗನೆ ಎದ್ದು ಒಂದು ವಿಶೇಷ ಸ್ಥಳದ ಕಡೆಗೆ ಹೊರಟಿದ್ದೆ. ಅದೆಷ್ಟೋ ಮಾರುಕಟ್ಟೆಗಳನ್ನು ನೋಡಿದ್ದರೂ , ಈ ಮಾರುಕಟ್ಟೆಯನ್ನು ನೋಡುವ ಕುತೂಹಲ ಹೆಚ್ಚಾಗುತ್ತಿತ್ತು. ಅಂದಹಾಗೆ ನಾನು ಅಲ್ಲಿಗೆ ಹೋಗುತ್ತಿದ್ದದ್ದು , ಯಾವ ಖರೀದಿಗೂ ಅಲ್ಲ.ಕೇವಲ ಅಲ್ಲಿನ ದೃಶ್ಯಗಳನ್ನು ಕಂಡು ಆನಂದಿಸುವುದಕ್ಕೆ . ಅನೇಕ ಕನಸುಗಳು ಓಡಾಡಿಕೊಂಡಿರುವ ಊರಿನಲ್ಲಿ , ಹಲವಾರು ಕನಸುಗಳನ್ನು ನನಸಾಗಿಸುವ , ಶ್ರಮದ ಫಲಿತಾಂಶವನ್ನು ಸೂರ್ಯ ಬೆಳಗುವ ಮುನ್ನವೆ ಪ್ರಕಟಿಸುವ ನೂರಾರು ಲೆಕ್ಕಾಚಾರಗಳ ತವರಾಗಿದೆ ಕೆ.ಆರ್ ಫ್ಲವರ್ ಮಾರ್ಕೆಟ್. ಆ ಸ್ಥಳದContinue reading “ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ”

ಏಳನೆ ಮಹಡಿಯ ಹೂವು

ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆContinue reading “ಏಳನೆ ಮಹಡಿಯ ಹೂವು”