ಹಲವಾರು ದಿನಗಳಿಂದ ಅನೇಕ ಬಾರಿ ನಿರಾಕರಿಸಿದರೂ ಮನದ ಹೊಸ್ತಿಲಿನಲ್ಲಿ ಓಡಾಡುತ್ತಿರುವ ಒಂದು ವಿಚಾರ ಗಮನ ಸೆಳೆಯುತ್ತಲೇ ಇದೆ . ನಿತ್ಯವೂ ನೋಡುತ್ತಿದ್ದ ಹಾಗು ಮನಸಾರೆ ಎಂದೂ ಒಪ್ಪದೆ ಕಡೆಗಣಿಸಿದ್ದ ದೃಶ್ಯಗಳು ಏಕೋ ಕಾಡುತ್ತಿದೆಯಲ್ಲಾ ?! ಇಷ್ಟರವರೆಗೆ ಮೆಚ್ಚಿರಲಿಲ್ಲ. ಹೆಚ್ಚೇನು ಗಮನಿಸಿರಲಿಲ್ಲ. ಈಗ ಆಗಾಗ ನೆನಪಾಗುತ್ತಿದೆ ಎಂದಾದರೆ ಅದು ಪ್ರಭಾವ ಬೀರಿದ್ದಾದರೂ ಯಾವಾಗ ?!ನಮಗೇ ತಿಳಿಯದ ಹಾಗೆ ಸೆರೆಯಾಗುವ ವಿಚಾರಗಳು ಬಹಳ ಕುತೂಹಲಕಾರಿ. ನಿತ್ಯವೂ ಓಡಾಡುತ್ತಿದ್ದ ಆ ದಾರಿ. ಎದುರಾಗುತ್ತಿದ್ದ ಮುಖಗಳು . ಕ್ಷಣಮಾತ್ರದಲ್ಲೇ ನಡೆದುಹೋಗುತ್ತಿದ್ದ ಪುಟ್ಟ ಪುಟ್ಟContinue reading “ಸಮಾಚಾರ ?”
Tag Archives: evening
ಅದೇ ದಾರಿ ಅದೇ ಟೀ!
ನಮ್ಮ ಸುತ್ತಮುತ್ತಲಿನವರನ್ನು ಗಮನಿಸಲು ಸಮಯ ಸಿಗುವುದು ರಜಾ ದಿನಗಳಲ್ಲಿ ಮಾತ್ರ ಎಂಬ ವಿಚಾರವನ್ನು ಅವಲೋಕಿಸುತ್ತಾ , ಮಾಡಲು ಯಾವುದೇ ಕೆಲಸವಿಲ್ಲದಷ್ಟು ಸ್ವಾತಂತ್ರ್ಯದಿಂದ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆ. ಬೇರೆ ದಿನಗಳಲ್ಲಾದರೆ , ಎದುರಿಗೆ ಬರುವವರನ್ನೆಲ್ಲಾ ದಿಟ್ಟಿಸುತ್ತಾ , ಆಚೆ ಈಚೆ ಸರಿದು , ಯಾವ ವಾಹನದಿಂದಲೂ ಕೆಸರನ್ನು ಎರಚಿಸಿಕೊಳ್ಳದಂತೆ ಎಚ್ಚರ ವಹಿಸಿ , ಆಗಾಗ ಸಮಯ ಎಷ್ಟಾಯಿತೆಂದು ಗಮನಿಸುತ್ತಾ , ಬೇರೆಯವರೆಲ್ಲರಿಗಿಂತಲೂ ನಾನು ಮೊದಲು ತಲುಪಬೇಕು ಎಂದು ಅನಾವಶ್ಯಕವಾದ ಅವಸರದಿಂದ ಹೆಜ್ಜೆಯಿಡುವುದು ಮಾಮೂಲಿ. ನಿತ್ಯವೂ ಅಲೆದಾಡುವ ಅದೇ ದಾರಿContinue reading “ಅದೇ ದಾರಿ ಅದೇ ಟೀ!”