ದಿನಪತ್ರಿಕೆ

ಯಾವುದಕ್ಕೂ ಸಮಯವಿಲ್ಲ ಎಂದುಕೊಂಡು ಕೊನೆಗೆ ಯಾವ ಕೆಲಸವನ್ನೂ ಮಾಡದೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ದಿನಚರಿ ಸಾಮಾನ್ಯವಾಗಿ ಬಿಟ್ಟಿದೆ.ಎಲ್ಲಾ ಸುದ್ದಿಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡು ನಂತರ ಎಲ್ಲಾ ತಿಳಿದಿರುವಂತೆ ಮಾತನಾಡಿಕೊಂಡು ತಿರುಗಾಡುವವರನ್ನು ನೋಡಿದಾಗ , ಗೂಡಂಗಡಿಗಳಲ್ಲಿ ನೇತಾಡಿಕೊಂಡಿರುವ ಹಾಗು ಮನೆಯ ಧೂಳನ್ನು ಮನಸಾರೆ ಸ್ವೀಕರಿಸಿರುವ ದಿನಪತ್ರಿಕೆಗಳು ಏನಂದುಕೊಂಡಿರಬಹುದು ಎಂಬ ಕುತೂಹಲ ಕಾಡುತ್ತಿರುತ್ತದೆ‌. ದಿನಪತ್ರಿಕೆ ಹಾಲಿನ ಪ್ಯಾಕೆಟ್ ಜೊತೆ ಮನೆಯಂಗಳದಲ್ಲಿ ಮುಂಜಾನೆ ಕಾಣದಿದ್ದರೆ ಏನೋ ಸಂಕಟ. ಮನೆತುಂಬಾ ಓಡಾಡುತ್ತಾ ಪೇಪರ್ ನವನನ್ನು ಶಪಿಸುತ್ತಾ ತಿರುಗಾಡುವುದು. ಐದು ನಿಮಿಷಗಳಿಗೊಮ್ಮೆ ಬಾಗಿಲಿನ ಬಳಿಗೆContinue reading “ದಿನಪತ್ರಿಕೆ”