ಏಳನೆ ಮಹಡಿಯ ಹೂವು

ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆContinue reading “ಏಳನೆ ಮಹಡಿಯ ಹೂವು”

ಅಮ್ಮ ಎಂದು ಕರೆದು ..

ಮನೆಯಿಂದ ದೂರದಲ್ಲೆಲ್ಲೊ ಕಾರಣಾಂತರಗಳಿಂದ ವಾಸಿಸುವಾಗ , ಅನೇಕ ತಪ್ಪು ಕಲ್ಪನೆಗಳ ಅರಿವಾಗುತ್ತದೆ. ಇಲ್ಲಿಂದ ದೂರ ಹೋಗಿ ಎಲ್ಲಾದರೂ ಒಬ್ಬನೇ ಆರಾಮವಾಗಿ ಇರಬಹುದು , ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನನಗೀಗ ಇದೆ. ಹೀಗೆಂದು ಮನೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವಾಗ ಆಲೋಚಿಸಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಮನೆಯವರ ಪ್ರಶ್ನೆಗಳು , ಅದರ ಹಿಂದಿದ್ದ ನಮ್ಮ ಮೇಲಿನ ಕಾಳಜಿ , ಕಿರಿಕಿರಿ ಎಂದನಿಸುತ್ತಿದ್ದ ಸಲಹೆಗಳು ..ಈಗ ಕೈ ಹಿಡಿದು ರಕ್ಷಿಸುತ್ತಿರುವ ರೀತಿಯನ್ನು ಮೂಕನಾಗಿ ಗಮನಿಸುತ್ತಾ , ಎಂದೂContinue reading “ಅಮ್ಮ ಎಂದು ಕರೆದು ..”