ಜಾಲಹಳ್ಳಿ ಕ್ರಾಸ್!

ತುಂಬಾ ಸಮಯದ ನಂತರ ಮನೆಗೆ ತೆರಳಿ , ಮನಸಾರೆ ಆನಂದಿಸಿ ಒಂದೆರಡು ದಿನಗಳನ್ನು ಕಳೆದು , ಮತ್ತೆ ಕೆಲಸದ ಕಾರಣದಿಂದ ನೆಲೆಸಿರುವ ಬೆಂಗಳೂರಿನೆಡೆಗೆ ತೆರಳುವ ಬಸ್ ಹತ್ತಬೇಕು. ಇದೊಂದು ಅನಿವಾರ್ಯ ಕಾರ್ಯ ಎಂದು ಒಪ್ಪಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಿತ್ತು ನನಗೆ. ಆ ಬಸ್ ಹತ್ತುವಾಗ , ಈ ಬೆಂಗಳೂರಿನಲ್ಲಿ ಬಿಟ್ಟು ಹೋದ ಎಲ್ಲಾ ತೊಂದರೆಗಳು ಅಂದಿನ ರಾತ್ರಿ ನಾನು ಮಲಗಲಿರುವ ಬೆಡ್ ನ ಮೇಲೆ ಕುಳಿತುಕೊಂಡು , ನನ್ನನ್ನೇ ಕಾಯುತ್ತಿರುವ ಹಾಗೆ ಭಾಸವಾದದ್ದೂ ಇದೆ. ಅಂದಿನ ರಾತ್ರಿಯContinue reading “ಜಾಲಹಳ್ಳಿ ಕ್ರಾಸ್!”

ಬಣ್ಣದ ಹಿಂದೆ …

ಬದುಕಿನ ಅದೆಷ್ಟೋ ತಕರಾರುಗಳಿಂದ ದೂರಸರಿದು ಒಂದು ಒಳ್ಳೆಯ ನಾಟಕ ನೋಡಬೇಕು , ಆ ನಾಟಕದಿಂದ ಹೊಸ ಸ್ಪೂರ್ತಿಯೊಂದು ದೊರೆಯಬಹುದು ಎಂದು ಕೆಲವೊಮ್ಮೆ ನಾವು ಲೆಕ್ಕಾಚಾರ ಹಾಕುವುದಿದೆ. ನಾಟಕ ನೋಡುವವರೇ ಇಲ್ಲದ ಈ ಕಾಲದಲ್ಲಿ , ಆ ಆಲೋಚನೆಯನ್ನು ಮಾಡುವುದೇ ಒಂದು ರೀತಿಯ ಸಾಧನೆ. ನಾವು ಹೇಗೆ ಒಂದು ನಿಟ್ಟುಸಿರನ್ನು ಅರಸಿ ಕುಳಿತುಕೊಂಡು ನಾಟಕ ನೋಡುತ್ತೇವೋ , ಅಲ್ಲಿ ಬಣ್ಣ ಹಚ್ಚಿಕೊಂಡು ನಟಿಸುವಾತನೂ ನಮ್ಮಂತೆಯೇ ಯಾವುದೋ ಒಂದು ಸುಳಿಗೆ ಸಿಲುಕಿ ಒದ್ದಾಡುತ್ತಿರುತ್ತಾನೆ ಎಂಬ ವಿಚಾರವನ್ನು ಮರೆತು ಬಿಟ್ಟಿರುತ್ತೇವೆ. ಅನೇಕContinue reading “ಬಣ್ಣದ ಹಿಂದೆ …”

ಕುಮಾರಪರ್ವತ – ಭಾಗ – ೩

ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಸ್ವಲ್ಪ ಹಿಂದೆಯ ತನಕ ಹೋಗಿ ನೋಡಿಕೊಂಡು ಬಂದರು. ಕಾಲು ನೋವಾಗುತ್ತಿದ್ದ ಕಾರಣ ಆತ ಅಲ್ಲೇ ಹಿಂದೆಲ್ಲೋ ಕುಳಿತು ಬಿಟ್ಟಿದ್ದ . ಆತನನ್ನು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ನೀರು ಹರಿಯುತ್ತಿದ್ದ ಜಾಗದ ಬಳಿ ಬಿಟ್ಟು , ನಾವು ಮುನ್ನಡೆದೆವು. ಸುಮಾರು ಇಪ್ಪತ್ತು ನಿಮಿಷಗಳ ನಂತರ ಕೊನೆಗೂ ಕಲ್ಲು ಮಂಟಪ ತಲುಪಿದೆವು. ಟ್ರೆಕ್ ಆರಂಭಿಸುವಾಗ ತೆಗೆದುಕೊಂಡಿದ್ದ ಪುಲಾವ್ ಸೇವಿಸಲು ಇದುವೇ ಸೂಕ್ತ ಸಮಯ ಎಂದು ನಿರ್ಧರಿಸಿದೆವು. ಒಟ್ಟಿನಲ್ಲಿ ಅದೆಷ್ಟೋ ಸಾಹಸಿಗಳು ಬೆಟ್ಟವನ್ನುContinue reading “ಕುಮಾರಪರ್ವತ – ಭಾಗ – ೩”

ಕುಮಾರಪರ್ವತ – ಭಾಗ – ೨

ಟ್ರೆಕ್ ಗೆ ತೆರಳುವಾಗ ಕೆಲವು ವಿಚಾರಗಳನ್ನು ನೆನಪಿಡಬೇಕು . ಅದೆಷ್ಟೇ ಕಷ್ಟವಾದರೂ , ಕೇವಲ ಮೂಗಿನಿಂದ ಉಸಿರಾಡಬೇಕು . ನೀವು ಏದುಸಿರು ಬಿಡುತ್ತಾ ಬಾಯಿಯಿಂದ ಉಸಿರಾಡಿದರೆ , ತುಂಬಾ ಬೇಗ ಸುಸ್ತಾಗುತ್ತದೆ . ಅತಿಯಾಗಿ ಬಾಯಾರಿಕೆ ಆದರೂ , ಸ್ವಲ್ಪವೇ ನೀರು ಕುಡಿಯಬೇಕು. ಅಗತ್ಯವಿಲ್ಲದ ಯಾವುದೇ ವಸ್ತುವನ್ನು ಅಪ್ಪಿತಪ್ಪಿಯೂ ಹೊತ್ತಕೊಂಡು ಹೋಗಬಾರದು. ನಾನು ಈ ಮೂರೂ ತಪ್ಪುಗಳನ್ನು ಮಾಡಿದ್ದೆ. ಪಯಣದುದ್ದಕ್ಕೂ ನನ್ನ ರೂಮ್ ಮೇಟ್ ನಾನು ಉಸಿರಾಟದ ಹಾಗು ನೀರಿನ ವಿಚಾರದಲ್ಲಿ ಮಾಡುತ್ತಿದ್ದ ತಪ್ಪನ್ನು ಮತ್ತೆ ಮತ್ತೆContinue reading “ಕುಮಾರಪರ್ವತ – ಭಾಗ – ೨”

ಕುಮಾರಪರ್ವತ -ಭಾಗ-೧

“ಬಸ್ ಎಷ್ಟೊತ್ತಿಗೆ ?” ಎಂದು ನನ್ನ ರೂಮ್ ಮೇಟ್ ಗೆ ಕೇಳುವಷ್ಟು ಗಟ್ಟಿಯಾಗಿ ಕಿರುಚುತ್ತಾ , ಅದಾಗಲೇ ಹತ್ತು ಬಾರಿ ಅಲೋಚಿಸಿ ಆಯ್ದುಕೊಂಡ ಬಟ್ಟೆ , ತಿಂಡಿಗಳನ್ನು ಪರಿಶೀಲಿಸುತ್ತಾ ಬ್ಯಾಗಿನ ಒಳಗೆ ತುರುಕಿಸುತ್ತಿದ್ದೆ. ನನ್ನ ಬಳಿ ಇದ್ದ ಶೂ ಹಾಗು ಬ್ಯಾಗ್ , ಟ್ರೆಕ್ ಎಂಬ ಸಾಹಸವನ್ನು ಇನ್ನಷ್ಟು ಕಠಿಣಗೊಳಿಸಲಿವೆ ಎಂಬುದು ಆಗಲೇ ನನಗೆ ತಿಳಿದಿತ್ತು . ಅವೆರಡೂ ಈ ಪಯಣಕ್ಕೆ ಸಾಟಿಯಾಗದ ಸಂಗಾತಿಗಳು. ಆದರೆ ಬೇರೆ ಆಯ್ಕೆಯೂ ಇರಲಿಲ್ಲ. ನಾನು ಜೀವಮಾನದಲ್ಲಿ ಕೈಗೊಂಡ ಈ ಮೊದಲContinue reading “ಕುಮಾರಪರ್ವತ -ಭಾಗ-೧”

ಟೀ ಕುಡಿತಿರಾ ಸರ್ ?

ಅಂಗಡಿ ತೆರೆಯುವ ಮುನ್ನವೇ ತಲುಪಬೇಕು ಎಂದು ಲೆಕ್ಕಾಚಾರ ಹಾಕಿದ್ದರೂ , ತುಸು ತಡವಾಗಿ ತಲುಪಿದ್ದೆ. ಅಗತ್ಯವಿಲ್ಲದ ಯಾವುದೋ ವಿಚಾರದ ಬಗ್ಗೆ ತಲೆಕೆಡಿಸಿಕೊಂಡು ಹಿಂದಿನ ರಾತ್ರಿ ನಿದ್ರೆಗೆ ಜಾರದೆ , ಹೇರ್ ಕಟ್ ಮಾಡಿಸಿಕೊಳ್ಳುವ ಶುಭ ಘಳಿಗೆ ಬಂದಿರುವ ವಿಚಾರದ ಬಗ್ಗೆ ಆಲೋಚಿಸಿ , ನಾಳೆ ಮುಂಜಾನೆಯೇ ಮುಹೂರ್ತ ಎಂದು ನಿರ್ಧರಿಸಿ ಮಲಗಿದ್ದು ಮತ್ತೆ ನೆನಪಾಯಿತು . ಅದೆಷ್ಟೋ ವಿಚಾರಗಳ ಬಗ್ಗೆ ನಿರಂತರವಾಗಿ ಆಲೋಚಿಸುತ್ತಾ ಬದುಕುತ್ತಿರುವಾಗ , ಹೇರ್ ಕಟ್ ಎಂಬ ಸಂದರ್ಭ ಅವೆಲ್ಲದಕ್ಕೂ ಒಂದು ವಿರಾಮ ನೀಡುತ್ತದೆContinue reading “ಟೀ ಕುಡಿತಿರಾ ಸರ್ ?”

ಎಷ್ಟಮ್ಮ ಕೆ.ಜಿಗೆ?

ಬೀದಿ ವ್ಯಾಪಾರಿಗಳ ಬಳಿ ಎನ್ನನಾದರೂ ಖರೀದಿಸಲು ಹೋಗುವಾಗ , ನಮ್ಮಲ್ಲಿ ಒಂದು ನಂಬಿಕೆ ಇದೆ. ಚೆನ್ನಾಗಿ ವ್ಯವಹರಿಸಿ , ಜಗಳವಾದರೂ ಆಡಿ , ಕಡಿಮೆ ಬೆಲೆಗೆ ಖರೀದಿಸಿದರೆ ನಾವು ಬುದ್ದಿವಂತರು ಹಾಗು ಚುರುಕು ಎಂದು ಕರೆಸಿಕೊಳ್ಳಲು ಸಮರ್ಥರು ಎಂದು . ಇದನ್ನು ಸಾಧಿಸುವ ಸಲುವಾಗಿ , ಅಲ್ಲಿ ನಡೆಯುವ ನಾಟಕೀಯ ಬೆಳವಣಿಗೆಗಳಲ್ಲಿ , ಅತ್ಯಂತ ಸುಂದರವಾದ ದೃಶ್ಯವೆಂದರೆ ..ಅಂಗಡಿಯವನಿಗೆ ಬೇಡ ಎಂದು ಹೇಳಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ , ಆತ ನಮ್ಮನ್ನು ವಾಪಸ್ಸು ಕರೆಯಲಿ ಎಂಬContinue reading “ಎಷ್ಟಮ್ಮ ಕೆ.ಜಿಗೆ?”

ಟಿಕೆಟ್

ಬಸ್ ಕಂಡಕ್ಟರ್ ಎಂದರೆ , ಎಲ್ಲೋ ಕಳೆದುಹೋದ ನಮ್ಮ ಮನಸ್ಸನ್ನು ಎಚ್ಚರಿಸಿ ವಾಸ್ತವಕ್ಕೆ ಕರೆತರುವ ಹಿತೈಷಿ ಎಂಬುದು ನನ್ನ ನಂಬಿಕೆ . ಆತ ತುಂಬಾ ಅಲೋಚನೆಗಳು ಒಳಿತಲ್ಲವೆಂದೂ , ಈಗಿನ ಕ್ಷಣದ ಮೇಲೆ ಗಮನವಿರಲಿ ಎಂದು ತಿಳಿಸುವ ಗೆಳೆಯನೂ ಹೌದು. ಕೆಲವೊಮ್ಮೆ ತೀರಾ ಗಡಿಬಿಡಿಯಲ್ಲಿ ಇರುವ ನಮಗೆ , ಉಸಿರಾಡಲು ನೆನಪಿಸಿ , ತಾನು ಏನೂ ಮಾಡದ ಹಾಗೆ ತೆರಳುವಾತ. ಅದೆಷ್ಟೋ ಬಾರಿ , ಆತನೊಂದಿಗೆ ಭಿನ್ನಾಭಿಪ್ರಾಯ ಮೂಡಿದಾಗ , ನಮ್ಮ ಸಾವಿರಾರು ಕಷ್ಟಗಳು ನಮಗೇ ಗೊತ್ತುContinue reading “ಟಿಕೆಟ್”