ಅಂದು ಮುಂಜಾನೆ ಬಹಳ ಬೇಗನೆ ಎದ್ದು ಒಂದು ವಿಶೇಷ ಸ್ಥಳದ ಕಡೆಗೆ ಹೊರಟಿದ್ದೆ. ಅದೆಷ್ಟೋ ಮಾರುಕಟ್ಟೆಗಳನ್ನು ನೋಡಿದ್ದರೂ , ಈ ಮಾರುಕಟ್ಟೆಯನ್ನು ನೋಡುವ ಕುತೂಹಲ ಹೆಚ್ಚಾಗುತ್ತಿತ್ತು. ಅಂದಹಾಗೆ ನಾನು ಅಲ್ಲಿಗೆ ಹೋಗುತ್ತಿದ್ದದ್ದು , ಯಾವ ಖರೀದಿಗೂ ಅಲ್ಲ.ಕೇವಲ ಅಲ್ಲಿನ ದೃಶ್ಯಗಳನ್ನು ಕಂಡು ಆನಂದಿಸುವುದಕ್ಕೆ . ಅನೇಕ ಕನಸುಗಳು ಓಡಾಡಿಕೊಂಡಿರುವ ಊರಿನಲ್ಲಿ , ಹಲವಾರು ಕನಸುಗಳನ್ನು ನನಸಾಗಿಸುವ , ಶ್ರಮದ ಫಲಿತಾಂಶವನ್ನು ಸೂರ್ಯ ಬೆಳಗುವ ಮುನ್ನವೆ ಪ್ರಕಟಿಸುವ ನೂರಾರು ಲೆಕ್ಕಾಚಾರಗಳ ತವರಾಗಿದೆ ಕೆ.ಆರ್ ಫ್ಲವರ್ ಮಾರ್ಕೆಟ್. ಆ ಸ್ಥಳದContinue reading “ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ”
Category Archives: flower
ಏಳನೆ ಮಹಡಿಯ ಹೂವು
ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆContinue reading “ಏಳನೆ ಮಹಡಿಯ ಹೂವು”