ಸಮಾಚಾರ ?

ಹಲವಾರು ದಿನಗಳಿಂದ ಅನೇಕ ಬಾರಿ ನಿರಾಕರಿಸಿದರೂ ಮನದ ಹೊಸ್ತಿಲಿನಲ್ಲಿ ಓಡಾಡುತ್ತಿರುವ ಒಂದು ವಿಚಾರ ಗಮನ ಸೆಳೆಯುತ್ತಲೇ ಇದೆ . ನಿತ್ಯವೂ ನೋಡುತ್ತಿದ್ದ ಹಾಗು ಮನಸಾರೆ ಎಂದೂ ಒಪ್ಪದೆ ಕಡೆಗಣಿಸಿದ್ದ ದೃಶ್ಯಗಳು ಏಕೋ ಕಾಡುತ್ತಿದೆಯಲ್ಲಾ ?! ಇಷ್ಟರವರೆಗೆ ಮೆಚ್ಚಿರಲಿಲ್ಲ. ಹೆಚ್ಚೇನು ಗಮನಿಸಿರಲಿಲ್ಲ. ಈಗ ಆಗಾಗ ನೆನಪಾಗುತ್ತಿದೆ ಎಂದಾದರೆ ಅದು ಪ್ರಭಾವ ಬೀರಿದ್ದಾದರೂ ಯಾವಾಗ ?!ನಮಗೇ ತಿಳಿಯದ ಹಾಗೆ ಸೆರೆಯಾಗುವ ವಿಚಾರಗಳು ಬಹಳ ಕುತೂಹಲಕಾರಿ. ನಿತ್ಯವೂ ಓಡಾಡುತ್ತಿದ್ದ ಆ ದಾರಿ. ಎದುರಾಗುತ್ತಿದ್ದ ಮುಖಗಳು . ಕ್ಷಣಮಾತ್ರದಲ್ಲೇ ನಡೆದುಹೋಗುತ್ತಿದ್ದ ಪುಟ್ಟ ಪುಟ್ಟContinue reading “ಸಮಾಚಾರ ?”

ದಿನಪತ್ರಿಕೆ

ಯಾವುದಕ್ಕೂ ಸಮಯವಿಲ್ಲ ಎಂದುಕೊಂಡು ಕೊನೆಗೆ ಯಾವ ಕೆಲಸವನ್ನೂ ಮಾಡದೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ದಿನಚರಿ ಸಾಮಾನ್ಯವಾಗಿ ಬಿಟ್ಟಿದೆ.ಎಲ್ಲಾ ಸುದ್ದಿಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡು ನಂತರ ಎಲ್ಲಾ ತಿಳಿದಿರುವಂತೆ ಮಾತನಾಡಿಕೊಂಡು ತಿರುಗಾಡುವವರನ್ನು ನೋಡಿದಾಗ , ಗೂಡಂಗಡಿಗಳಲ್ಲಿ ನೇತಾಡಿಕೊಂಡಿರುವ ಹಾಗು ಮನೆಯ ಧೂಳನ್ನು ಮನಸಾರೆ ಸ್ವೀಕರಿಸಿರುವ ದಿನಪತ್ರಿಕೆಗಳು ಏನಂದುಕೊಂಡಿರಬಹುದು ಎಂಬ ಕುತೂಹಲ ಕಾಡುತ್ತಿರುತ್ತದೆ‌. ದಿನಪತ್ರಿಕೆ ಹಾಲಿನ ಪ್ಯಾಕೆಟ್ ಜೊತೆ ಮನೆಯಂಗಳದಲ್ಲಿ ಮುಂಜಾನೆ ಕಾಣದಿದ್ದರೆ ಏನೋ ಸಂಕಟ. ಮನೆತುಂಬಾ ಓಡಾಡುತ್ತಾ ಪೇಪರ್ ನವನನ್ನು ಶಪಿಸುತ್ತಾ ತಿರುಗಾಡುವುದು. ಐದು ನಿಮಿಷಗಳಿಗೊಮ್ಮೆ ಬಾಗಿಲಿನ ಬಳಿಗೆContinue reading “ದಿನಪತ್ರಿಕೆ”

ನಗಲು ನೆನಪಿಸುವವರು

ಯಾವುದೇ ಸಮಾರಂಭಕ್ಕೆ ಹೋದರೂ , ನಾನು ತಪ್ಪದೆ ಗಮನಿಸುವವರೆಂದರೆ , ತಮ್ಮ ಆನಂದದ ಕ್ಷಣಗಳನ್ನು ನೆನಪಿನಲ್ಲೇ ಸಂಗ್ರಹಿಸುತ್ತಾ ಅಲೆದಾಡುವ ಫೋಟೋಗ್ರಾಫರ್ ಗಳು. ಎಲ್ಲರ ಬೇಡಿಕೆಗಳನ್ನು ಪೂರೈಸುತ್ತಾ , ಇತರರ ನಗುವಿಗೆ ಸಾಕ್ಷಿಯಾಗುವ ವಿಶೇಷ ವ್ಯಕ್ತಿಗಳು ಅವರು. ಅವರ ಕೌಶಲ್ಯವನ್ನು ಕಡೆಗಣಿಸಿ , ಅವರಿಗೆ ತಮ್ಮದೇ ವಿಚಿತ್ರ ಸೂಚನೆಗಳನ್ನು ನೀಡುವ ಹಲವರು. ಅವರ ಅಭಿಪ್ರಾಯಕ್ಕೂ ಕಾಯದೆ , ತಮಗೆ ಸಮಾಧಾನವಾಗುವವರೆಗೆ ಫೋಟೋ ತೆಗೆಸಿಕೊಳ್ಳುವ ಹಲವರು. ಇವರೆಲ್ಲರನ್ನೂ ಮೀರಿ , ಅವರು ಕಣ್ಣೆದುರು ನಿಂತಿದ್ದರೂ ತಮ್ಮದೇ ಫೋನನ್ನು ಅವಲಂಬಿಸುವ ವೀರರು.Continue reading “ನಗಲು ನೆನಪಿಸುವವರು”

ಬಣ್ಣದ ಹಿಂದೆ …

ಬದುಕಿನ ಅದೆಷ್ಟೋ ತಕರಾರುಗಳಿಂದ ದೂರಸರಿದು ಒಂದು ಒಳ್ಳೆಯ ನಾಟಕ ನೋಡಬೇಕು , ಆ ನಾಟಕದಿಂದ ಹೊಸ ಸ್ಪೂರ್ತಿಯೊಂದು ದೊರೆಯಬಹುದು ಎಂದು ಕೆಲವೊಮ್ಮೆ ನಾವು ಲೆಕ್ಕಾಚಾರ ಹಾಕುವುದಿದೆ. ನಾಟಕ ನೋಡುವವರೇ ಇಲ್ಲದ ಈ ಕಾಲದಲ್ಲಿ , ಆ ಆಲೋಚನೆಯನ್ನು ಮಾಡುವುದೇ ಒಂದು ರೀತಿಯ ಸಾಧನೆ. ನಾವು ಹೇಗೆ ಒಂದು ನಿಟ್ಟುಸಿರನ್ನು ಅರಸಿ ಕುಳಿತುಕೊಂಡು ನಾಟಕ ನೋಡುತ್ತೇವೋ , ಅಲ್ಲಿ ಬಣ್ಣ ಹಚ್ಚಿಕೊಂಡು ನಟಿಸುವಾತನೂ ನಮ್ಮಂತೆಯೇ ಯಾವುದೋ ಒಂದು ಸುಳಿಗೆ ಸಿಲುಕಿ ಒದ್ದಾಡುತ್ತಿರುತ್ತಾನೆ ಎಂಬ ವಿಚಾರವನ್ನು ಮರೆತು ಬಿಟ್ಟಿರುತ್ತೇವೆ. ಅನೇಕContinue reading “ಬಣ್ಣದ ಹಿಂದೆ …”