ಭಾವುಕತೆ ಬೇಕೆ?

ಎಲ್ಲವೂ ವೇಗವಾಗಿ , ನಮ್ಮ ಹತೋಟಿ ತಪ್ಪಿ ಸಾಗುತ್ತಿರುವ ಕಾಲದಲ್ಲಿ , ಅದರ ಪರಿವೇ ಇಲ್ಲದಂತೆ ಸದಾ ಭಾವುಕನಾಗಿ ಇರುವ ವ್ಯಕ್ತಿಯನ್ನು ಭೇಟಿಯಾದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಮರೆತು ಹೋಗಿರುವ ಮಾನವೀಯತೆ ಅಲ್ಲಿ ಅಲೆದಾಡುತ್ತಾ , ನಿಮ್ಮನ್ನು ನೋಡಿದಾಗ ನಗೆ ಬೀರಬಹುದು . ನೀವು ಎಂದೂ ಯೋಚಿಸಿರದ ಆಯಾಮವೊಂದು ನಿಮಗಾಗಿ ಕಾದು ಕುಳಿತಿರಬಹುದು . ಹೆಚ್ಚಿನ ಲೆಕ್ಕಾಚಾರಗಳ ತವರಾಗಿರದ ಆ ಮನಸ್ಸು , ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿರುವ ನೂರಾರು ಆಲೋಚನೆಗಳನ್ನು ಬೆರಗಾಗಿ ನೋಡುತ್ತಿರುವ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿContinue reading “ಭಾವುಕತೆ ಬೇಕೆ?”