ಸಂಭಾಷಣೆ

ಸರಿಸುಮಾರು ಒಂದು ವರ್ಷವಾಯಿತು ಈ ವೇದಿಕೆಯಲ್ಲಿ ಮನದ ಲಹರಿಗಳನ್ನು ಸೆರೆಹಿಡಿದು. ಕೆಲವೊಮ್ಮೆ ಅಭಿಪ್ರಾಯ ಅನುಮತಿಗಳನ್ನು ಕೇಳದೆಯೇ ಈ ಲಹರಿಗಳು ಎಲ್ಲೆಲ್ಲೋ ಪ್ರತ್ಯಕ್ಷವಾಗಿ ನನ್ನನ್ನೇ ಹೌಹಾರಿಸಿದ್ದೂ ಇದೆ. ಪ್ರಕಟವಾಗದಿದ್ದರೂ ಭಾವನೆಗಳು ಒಂದು ರೀತಿಯಲ್ಲಿ ನಿರಂತರವಾಗಿ ಮನದೊಳಗೆ ಸಂಚರಿಸುತ್ತಿರುತ್ತವೆ ಎಂದನಿಸುತ್ತದೆ. ಹೊರಬೀಳಲು ಹೆಚ್ಚೇನು ಸಮಯ ತೆಗೆದುಕೊಳ್ಳದ , ಹೊರಬಿದ್ದ ಮೇಲೆ ಕೆಲವೊಮ್ಮೆ ಬಹಳ ದಿನಗಳವರೆಗೆ ಕಾಡುವ “ಮಾತು” ನನಗೆ ತುಂಬಾ ಕುತೂಹಲಕಾರಿ ಎಂದನಿಸುತ್ತದೆ. ಯಾರೋ ಆಡಿದ ನೂರಾರು ಸಾಲುಗಳ ಮಾತು ಯಾವುದೇ ಪ್ರಭಾವವನ್ನು ಬೀರದಿರಬಹುದು. ಆದರೆ ಸುಮ್ಮನೆ ಒಮ್ಮೆ ಮನೆಯ ಅಂಗಳದಲ್ಲಿ ಅರಳಿರುವ ಹೂವೊಂದನ್ನು ನೋಡಿದಾಕ್ಷಣ ಮನಸ್ಸಿಗೆ ಆನಂದವಾಗಿ ಬೇರೆ ಎಲ್ಲವೂ ಮರೆತು ಹೋಗಿಬಿಡಬಹುದು. ಅಲ್ಲಿ ಯಾವುದೇ ಹಿಂದಿನ ಪರಿಚಯವಿಲ್ಲ . ಮಾತುಗಳ ಪ್ರಭಾವವಿಲ್ಲ. ಆ ಹೂವಿಗೆ ನಿಮಗಾದ ಆನಂದದ ಅರಿವೇ ಇಲ್ಲದಿರಬಹುದು. ಪ್ರತಿಕ್ರಿಯೆ ಬಯಸದ ಮಾತುಗಳು ಆಗ ಅಲ್ಲಿ ನಿಮ್ಮೊಳಗೆ ಉದಯಿಸುತ್ತವೆ. ಇನ್ನು ಕೆಲವೊಮ್ಮೆ …ಯಾರೋ ಬಹಳ ಸರಳವಾಗಿ ಆಡಿದ ಮಾತುಗಳು …ನಮ್ಮನ್ನು ಬಹಳ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗಳಿಗೆ ಉತ್ತರವಾಗಿರುತ್ತವೆ. ಆಕಾಶದೆತ್ತರದಲ್ಲಿ ಹಾರುತ್ತಿರುವ ಹಕ್ಕಿಗೆ , ಭುವಿಯಲ್ಲಿ ನಿಂತು ಅದನ್ನು ನೋಡಿ ಆನಂದಿಸುತ್ತಿರುವ ಚೇತನಗಳ ಅರಿವಿಲ್ಲ. ಎಲ್ಲೋ ದೂರದಲ್ಲಿರುವ ನಕ್ಷತ್ರಗಳಿಗೆ ಅವುಗಳನ್ನು ವಿಸ್ಮಯದಿಂದ ದಿಟ್ಟಿಸಿ ಮೆಚ್ಚುತ್ತಿರುವ ಕಂಗಳ ಅರಿವಿಲ್ಲ. ಎಂದೋ ಬರೆದ ಸಾಲುಗಳನ್ನು ಇಂದು ಓದಿದ ಮನಸ್ಸು ಮಿಡಿಯಬಹುದು. ಎಂದೋ ಎಲ್ಲೋ ಕೇಳಿದ ಮಾತು ಇಂದು ನೆನಪಾಗಿ ರೋಮಾಂಚನವಾಗಬಹುದು. ಪ್ರಭಾವ ಬೀರುವ ಸಂಭಾಷಣೆಗಳಲ್ಲಿ ಮಾತುಗಳು ಇರಲೇಬೇಕೆಂದೇನಿಲ್ಲ. ಮಾತುಕತೆಗಳು ನಿತ್ಯವೂ ನಡೆಯುತ್ತಿರಬೇಕೆಂದೇನಿಲ್ಲ.ಬಹಳ ದಿನಗಳ ಬಳಿಕ ಆತ್ಮೀಯರೊಡನೆ ಮಾತನಾಡಿದಾಗಲೂ , ಆ ಬಾಂಧವ್ಯದಲ್ಲಿ ಹೆಚ್ಚೇನೂ ಬದಲಾವಣೆಯಾಗಿರುವುದಿಲ್ಲ….ಹೌದಲ್ಲವೆ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: